Wednesday, October 6, 2021

ಮಾಡುವಾಟ

 

ಮಾಡಿ ಮಡಿ, ಮಡಿಯಿಂದ ಮಾಡಿ, ಇವು ಪ್ರತೀತಿ
ಮಾಡುವನೆಂಬ ತವಕವೀಯ್ವುದು ಆಶೆಯ ಸಂಪ್ರತಿ
ಮಾಡುವಾಚರದಿಲ್ಲಹುದು ದೃಢತೆಯ ಸಂಕೀರ್ತಿ
ಮಾಡುವುದಕ್ಕೂ ಮುನ್ನ ಕಾಡುವುದರ್ಹತೆಯ ಭೀತಿ
ಮಾಡುವಾಗಾಗುವುದು ವಿಕಸಸಂಭವದ ನಿಯತಿ
ಮಾಡಿದಾಗುಂಟಾಗುವುದು ಆನಂದದ ಪ್ರೀತಿ
ಮಾಡುವುದಕ್ಕಿರುವುದು ಒಂದೇ ರೀತಿ
ಮಾಡದೇ ಇರುವುದಕ್ಕೆ ಸಿಗುವುದು ಸಾವಿರ ನೀತಿ

📝ಸಂಜೀವ್ ಕೌಶಿಕ್

No comments:

Post a Comment