ಹಾರುವದೃಷ್ಟಿ
Sunday, October 17, 2021
ಹಾರುವದೃಷ್ಟಿ
Wednesday, October 13, 2021
ಲೋಕಸತ್ಯ
ಸ್ವಪ್ನದಲೊಳ್ಳೆಯದನ್ನೆನೆದು, ಅದನ್ನಾಶ್ರಯಿಸ್ಯನ್ಯರಿಗೆ ಒಳಿತನ್ಮಾಡುವುದತಿಳಿವುದು, ಸತ್ಯಾತ್ಮಕ ಭ್ರಮಾ ಲೋಕ
ನೈಜದಲ್ಲಿ ನಾವೇನ್ಮಾಡಿದರೂ ಅದು ನಾವೇ ಮಾಡಿಹೆವೆಂಬೊಬ್ಬಿರಿಯುವುದು ಅಸತ್ಯದ ಭ್ರಮಾ ಲೋಕ
ಸ್ವಲ್ಪಜ್ಙಾನದಿಂದ ಅಹಂ ಅಳಿಸಿ ಆಕಾಶೋತ್ತಮವನ್ತಿಳಿವ ಪ್ರಯತ್ನವು, ಸತ್ವಯುತ ಸತ್ಯಾಸತ್ಯತೆ ವಿವರಿಸುವ ಲೋಕ
ಯತ್ನವಿಲ್ಲದೇ ಆಕಾಶದಲ್ತೇಲಾಡುತ, ಅನರ್ಥವನ್ನೆಲ್ಲಾ ನಂಬುವಂತಾಗುವುದು ನಿಸ್ಸತ್ವದ ಗೋಜಲಿನ ಗೊಂದಲ ಲೋಕ
ಜಗತ್ ಒಳ್ಳೆಯಕಡೆಗೆ ನಡೆಸುವ್ಯತ್ನ ತರುವುದು ನಿಹಿತ್ಸ್ವಾರ್ಥವಲ್ಲದ ಪರಹಿತ ತತ್ವ ಚಿಂತನೆಯ ಲೋಕ
ಸ್ವಾಧ್ಯಾಯವ ಮಾಡಿ ತಪಸ್ಸಿದ್ಧಿ ಪಡೆದು ಸಹೃದಯರೊಡಗೂಡಿದೊಡೆ, ಆನಂದಾನುಭವದ, ಸತ್ಯವನ್ನರ್ಥೈಸುವ ಪರಮಾರ್ಥ ಲೋಕ
📝 ಸಂಜೀವ್ ಕೌಶಿಕ್
Tuesday, October 12, 2021
ಸಮಯಸ್ಪಷ್ಟಿ
ಸಮಯದೊಳಡಗಿಹುದು ಸಮಸ್ತ ಲೋಕದ ಇಷ್ಟಿ
ಸಮಯಕ್ಕಾಗಿರುವುದು ಅದರಾಗುಹೋಗುಗಳ ಸೃಷ್ಟಿ
ಸಮಯದಲಿ ಮೇಲ್ಕಾಣುವುದು ಕಲಾಸ್ಕಲಿತ ವೈಶಿಷ್ಟಿ
ಸಮಯಕ್ಕೊಪ್ಪಿ ನಡೆವುದೇ ಸಾರ್ಥಕತೆಯ ಆಶಿಷ್ಟಿ
ಸಮಯದೊಳಗಾಗುವುದು ವಿವಿಧತೆಯ ದೃಢಿಷ್ಟಿ
ಸಮಯದಿಂದಲೇ ಎಲ್ಲಿಯೂ ಬೆಳೆವುದು ಬಲಿಷ್ಟಿ
ಸಮಯದೊಳಗಿಂದ್ಬರುವುದು ಸಮೇಷ್ಟಿ
ಸಮಯಕ್ನಮಿಸಿ ನಡೆವಾಗ ನಮಗಿಹುದು ಪುಷ್ಟಿ
📝 ಸಂಜೀವ್ ಕೌಶಿಕ್
Wednesday, October 6, 2021
ಮಾಡುವಾಟ
ಮಾಡಿ ಮಡಿ, ಮಡಿಯಿಂದ ಮಾಡಿ, ಇವು ಪ್ರತೀತಿ
ಮಾಡುವನೆಂಬ ತವಕವೀಯ್ವುದು ಆಶೆಯ ಸಂಪ್ರತಿ
ಮಾಡುವಾಚರದಿಲ್ಲಹುದು ದೃಢತೆಯ ಸಂಕೀರ್ತಿ
ಮಾಡುವುದಕ್ಕೂ ಮುನ್ನ ಕಾಡುವುದರ್ಹತೆಯ ಭೀತಿ
ಮಾಡುವಾಗಾಗುವುದು ವಿಕಸಸಂಭವದ ನಿಯತಿ
ಮಾಡಿದಾಗುಂಟಾಗುವುದು ಆನಂದದ ಪ್ರೀತಿ
ಮಾಡುವುದಕ್ಕಿರುವುದು ಒಂದೇ ರೀತಿ
ಮಾಡದೇ ಇರುವುದಕ್ಕೆ ಸಿಗುವುದು ಸಾವಿರ ನೀತಿ
📝ಸಂಜೀವ್ ಕೌಶಿಕ್