Thursday, September 16, 2021

ಜೀವನಡೆ


ವರ್ಣಾಶ್ರಮದ ವರ್ಣಗಳ ಕರ್ಮ

ಬ್ರಾಹ್ಮಣರೆಲ್ಲರೂ ಶರ್ಮ

ಕ್ಷತ್ರಿಯರೆಲ್ಲರೂ ವರ್ಮ

ವೈಶ್ಯರು ಗುಪ್ತ ಸೂತ ಶೂದ್ರರ ಧರ್ಮ

ಇವನ್ನರಿಯದೆ ಹರಡಿಸುವರ್ತಿಳಿಯದಮರ್ಮ

ಮಾಡುವುದೇನ್ಗೊತ್ತಾಗದೆ ನಡೆಸುವರಧರ್ಮ

ಕ್ರಮಾನುಕ್ರಮದಲಿ ಸುಳಿತೆರವುದು ಕರ್ಮವಿಕರ್ಮ

ಜ್ಞಾನದಿಂಬಾಳ್ಬೆಳಗಾಗುವುದೇ ಮಾನವ ಸ್ವಧರ್ಮ


Monday, September 13, 2021

ಹೀಗೊಂದು ಜೀವನಪದ್ಯ

ಹೀಗೊಂದು ಜೀವನಪದ್ಯ

ಕುಗ್ರಾಮವಾಸವ ಮಾಡಿ 
ಕುಲಹೀನಸೇವೆಗೆ ತೊದಲಾಡಿ  
ಕುಭೋಜನಕ್ಕೆ ತಡಕಾಡಿ 
ಸಂಸಾರತಾಪತಪ್ತರಾಗಿ ಬೆದಕಾಡಿ   
ಮನೋ ವಿಶ್ರಾಂತಿ ಕೊಡುವುದನ್ನು ಹುಡುಕಾಡಿ  
ತಿಳಿದುಕೊಳ್ಳಬೇಕಾದುದಿಷ್ಟೇ ನೋಡಿ 
ತಂದೆ ತಾಯಿಯರ ಪ್ರೀತಿ ಆಶೀರ್ವಾದಗಳ ಬದುಕುಗಾಡಿ 
ಸದ್ಭಾರ್ಯಾ ಸದ್ಸಂತಾನ ಸದಸ್ಸತಾಂಗಳ ಒಡನಾಡಿ

 📝 ಸಂಜೀವ್ ಕೌಶಿಕ್


Pursuing: 

  • the aspirations of staying in a bad place
  • the passion for serving the wrong clan
  • the wait for eating with the bad
  • without knowing the art of running the family
  • in search of the ability of equanimity wouldn't get us anywhere

However, we just need to know what we require is:

  • the life vehicle that runs with the blessings of love from parents & elders
  • as well as, Good wife, Good children and Good relatives & friendship